Bengaluru, Dec 17: Women Self-help Groups Convention, of Rashtrotthana Seva Vasati project, was held herein Rashtrotthana Vidya Kendra – Arkavathy. 311 Members of 61 Self-help Groups took part in the convention. Seva Vasati is a unique project of Rashtrotthana for the Integrated Development of Slums for the past 3 decades.

ಬೆಂಗಳೂರು, ಡಿಸೆಂಬರ್ 17: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ರಾಷ್ಟ್ರೋತ್ಥಾನ ಸೇವಾವಸತಿ ಯೋಜನೆಯ ಮಹಿಳಾ ಸ್ವ-ಸಹಾಯ ಗುಂಪುಗಳ ಸಮಾವೇಶವನ್ನು ಆಯೋಜಿಸಲಾಗಿತ್ತು. 61 ಸ್ವಸಹಾಯ ಗುಂಪುಗಳಿಂದ ಒಟ್ಟು 311 ಸದಸ್ಯರು ಭಾಗವಹಿಸಿದ್ದರು. ಸೇವಾವಸತಿ, ಇದು ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೋತ್ಥಾನವು ಕಳೆದ 3 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಅಪೂರ್ವ ಯೋಜನೆ.

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರವಿಕುಮಾರ್, ರಾಷ್ಟ್ರೋತ್ಥಾನ ಪರಿಷತ್‍ನ ಆಡಳಿತ ಮಂಡಳಿ ಸದಸ್ಯರು ಹಾಗೂ ಸೇವಾವಸತಿ ಪ್ರಕಲ್ಪದ ವಿಭಾಗ ಪ್ರಮುಖರು ಮತ್ತು ಸ್ವಾಮಿನಿ ವಿವೇಕಮಯಿ, ಭವತಾರಿಣಿ ಆಶ್ರಮ, ಬೆಂಗಳೂರು, ಇವರು ಉಪಸ್ಥಿತರಿದ್ದು, ಬಂದಂತಹ ತಾಯಿಂದಿರುಗಳಿಗೆ ಸ್ವ-ಸಹಾಯ ಗುಂಪುಗಳು ನಡೆಸುವುದರಿಂದ ಆಗುವ ಪ್ರಯೋಜನಗಳು ಮತ್ತು ಅದರ ಮಹತ್ವವನ್ನು ತಿಳಿಸಿದರು.

ಸ್ವಾಮಿನಿ ವಿವೇಕಮಯಿರವರು ಹಿಂದೂಧರ್ಮದ ಮಹತ್ವ, ರಾಷ್ಟ್ರಸೇವೆ, ಹಿಂದೂಧರ್ಮಕ್ಕೆ ಹೋರಾಡಿದ ಮಹಾಪುರುಷರ ಸಾಧನೆಗಳು, ಸೀತಾದೇವಿಯ ಹಿರಿಮೆಯನ್ನು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಅಡ್ವೋಕೇಟ್ ಆಗಿರುವ ಶ್ರೀಮತಿ ಕ್ಷಮಾ ನರಗುಂದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಬಗೆಗೆ ಮಾರ್ಗದರ್ಶನ ಮಾಡಿದರು.

ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಸ್ವ-ಸಹಾಯ ಸಂಘಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ನಡೆಸುವುದೆಂದು ಉದಾಹರಣೆಗಳ ಮೂಲಕ ವಿವರಿಸಿದರು.

ಡಿಸೆಂಬರ್, 2022ಕ್ಕಿಂತ ಹಿಂದೆ ಪ್ರಾರಂಭಿಸಿ, ನಿಯಮಾನುಸಾರವಾಗಿ ನಡೆಸಲಾದ ಸ್ವ-ಸಹಾಯ ಗುಂಪುಗಳಿಗೆ ಶ್ರೀ ರವಿಕುಮಾರ್‍ ಅವರು ಅಭಿನಂದನಾ ಪತ್ರ ವಿತರಿಸಿದರು. ಕೊನೆಯಲ್ಲಿ ಸಂಘದ ಸದಸ್ಯರು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.

https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #SelfHelpGroup #WomenSelfHelp #SelfHelpConvention

Project Info

  • Category: News & Media
  • Location: Arkavathy, Bengaluru
  • Completed Date: 17 Dec 2023