Sri Rama Pranapratistha Utsav in Rashtrotthana
Jan 22: Sri Rama Pranapratistha Utsav was celebrated with great gaiety at Parishat Head Office, Tapas-Sadhana, Seva Vasati (Slum) and Rashtrotthana Schools across Karnataka.
Ram was worshiped in various ways, such as dance, music, lecture, masquerade, procession, bhajan, puja, painting of rangoli, bonfire etc. Arrangements were made for live viewing of the Ayodhya program in all the centres, sweets were also distributed.
In the program held at Head Office, the President of the Parishat, Sri M P Kumar, General Secretary, Sri N Dinesh Hegde and others were present.
It was special that Rashtrotthana Vidya Kendra – Davangere celebrated Sri Rama Pran Pratistha with the children of Sri Mauneshwari Deaf and Dumb Residential School, Davangere.
Earlier, Rashtrotthana family members went door-to-door across Karnataka in the Mahasamparka Abhiyan conducted as a part of Ayodhya Sri Ram Prana Pratishthapana and delivered invitations and Ramakshata.
ಜನವರಿ 22: ಬೆಂಗಳೂರಿನಲ್ಲಿರುವ ಪರಿಷತ್ ಕೇಂದ್ರ ಕಚೇರಿ, ತಪಸ್-ಸಾಧನಾ, ಸೇವಾವಸತಿ (ಸ್ಲಂ) ಹಾಗೂ ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾ ಉತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು.
ನೃತ್ಯ, ಸಂಗೀತ, ಉಪನ್ಯಾಸ, ಛದ್ಮವೇಶ, ಶೋಭಾಯಾತ್ರೆ, ಭಜನೆ, ಪೂಜೆ, ರಂಗೋಲಿಯ ಚಿತ್ತಾರ, ದೀಪೋತ್ಸವ, ಹೀಗೆ ಬಗೆಬಗೆಯಾಗಿ ರಾಮನನ್ನು ಭಾವಿಸಲಾಯಿತು. ಎಲ್ಲ ಕಡೆಯೂ ಅಯೋಧ್ಯಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದಲ್ಲದೇ, ಸಿಹಿಯನ್ನೂ ಹಂಚಲಾಯಿತು.
ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯವರು ಶ್ರೀರಾಮ ಪ್ರಾಣಪ್ರತಿಷ್ಠಾ ಸಂಭ್ರಮವನ್ನು ದಾವಣಗೆರೆಯ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಗರ ವಸತಿ ಶಾಲೆಯ ಮಕ್ಕಳೊಂದಿಗೆ ಆಚರಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ರಾಷ್ಟ್ರೋತ್ಥಾನ ಪರಿವಾರದವರು ಅಯೋಧ್ಯಾ ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ನಡೆಸಲಾದ ಮಹಾಸಂಪರ್ಕ ಅಭಿಯಾನದಲ್ಲಿ ಕರ್ನಾಟಕ ರಾಜ್ಯಾದ್ಯಂತದ ಮನೆ-ಮನೆಗೆ ತೆರಳಿ ಆಹ್ವಾನಪತ್ರಿಕೆ ಹಾಗೂ ರಾಮಾಕ್ಷತೆಯನ್ನು ತಲುಪಿಸಿದರು.