Bengaluru, Dec 10: Women Self-help Groups Convention, of Rashtrotthana Seva Vasati project, was held herein Rashtrotthana Vidya Kendra – Arkavathy. 507 Members of 70 Self-help Groups from 45 Seva Vasatis took part in the convention. Seva Vasati is a unique project of Rashtrotthana for the Integrated Development of Slums for the past 3 decades.
ಬೆಂಗಳೂರು, ಡಿಸೆಂಬರ್ 10: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ರಾಷ್ಟ್ರೋತ್ಥಾನ ಸೇವಾವಸತಿ ಯೋಜನೆಯ ಮಹಿಳಾ ಸ್ವ-ಸಹಾಯ ಗುಂಪುಗಳ ಸಮಾವೇಶವನ್ನು ಆಯೋಜಿಸಲಾಗಿತ್ತು. 45 ಸೇವಾವಸತಿಗಳ 70 ಸ್ವಸಹಾಯ ಗುಂಪುಗಳಿಂದ ಒಟ್ಟು 507 ಸದಸ್ಯರು ಭಾಗವಹಿಸಿದ್ದರು. ಸೇವಾವಸತಿ, ಇದು ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೋತ್ಥಾನವು ಕಳೆದ 3 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಅಪೂರ್ವ ಯೋಜನೆ.
ಸಮಾವೇಶದ ಉದ್ಘಾಟನೆಯನ್ನು ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ಪರಿಷತ್ ಹಾಗೂ ಸ್ವಾಮಿನಿ ವಿವೇಕಮಯಿ, ಭವತಾರಿಣಿ ಆಶ್ರಮ, ಬೆಂಗಳೂರು, ಇವರು ನೆರವೇರಿಸಿದರು.
ಸ್ವಾಮಿನಿ ವಿವೇಕಮಯಿರವರು ಹಿಂದೂ ಧರ್ಮದ ಮಹತ್ವ, ರಾಷ್ಟ್ರಸೇವೆ, ಹಿಂದೂಧರ್ಮಕ್ಕೆ ಹೋರಾಡಿದ ಮಹಾಪುರುಷರ ಸಾಧನೆಗಳು, ಸ್ವಾಮಿ ವಿವೇಕನಂದರ ಸಾಧನೆ ಮತ್ತು ಛತ್ರಪತಿ ಶಿವಾಜಿಯ ಸಾಧನೆಗಳನ್ನು ಉದಾಹರಣೆಗಳ ಮೂಲಕ ತಾಯಿಂದಿರುಗಳಿಗೆ ತಿಳಿಸಿಕೊಟ್ಟರು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ ಹೆಗ್ಡೆ, UCO ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಮತ್ತು ಶ್ರೀ ರವಿಕುಮಾರ್, ರಾಷ್ಟ್ರೋತ್ಥಾನ ಪರಿಷತ್ ಸೇವಾವಸತಿ ಪ್ರಕಲ್ಪದ ವಿಭಾಗ ಪ್ರಮುಖರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು, ಕುಟುಂಬ, ಸಮಾಜ, ದೇಶದ ಮಹತ್ವ ಮತ್ತು ಪ್ರಾಮುಖ್ಯತೆ ಬಗೆಗೆ ತಿಳಿಸಿಕೊಟ್ಟರು.
ಡಿಸೆಂಬರ್, 2022ಕ್ಕಿಂತ ಹಿಂದೆ ಪ್ರಾರಂಭಿಸಿ, ನಿಯಮಾನುಸಾರವಾಗಿ ನಡೆಸಲಾದ ಸ್ವ-ಸಹಾಯ ಗುಂಪುಗಳಿಗೆ ಶ್ರೀ ರವಿಕುಮಾರ್ ಅವರು ಅಭಿನಂದನಾ ಪತ್ರ ವಿತರಿಸಿದರು. ಕೊನೆಯಲ್ಲಿ ಸಂಘದ ಸದಸ್ಯರು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #SelfHelpGroup #WomenSelfHelp #SelfHelpConvention
Project Info
- Category: News & Media
- Location: Rashtrotthana Vidya Kendra - Arkavathy, Bengaluru
- Completed Date: 10 Dec 2023