• August 14, 2024
  • RP
  • 0

3 New Schools for RVK CBSE Group

3 New Schools of Rashtrotthana Vidya Kendra CBSE Group were inaugurated in Somanahalli, Bengaluru (Apr 28), Kerur, Bagalkote (May 29) and Ballari (June 2) and started Academic Activty for 2024-25.

Bengaluru, Apr 28: The New Building of the 12th School of Rashtrotthana Vidya Kendra Group of CBSE Schools was dedicated herein Somanahalli on Kanakapura Road.

ಬೆಂಗಳೂರು, ಏಪ್ರಿಲ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 12ನೇ ಶಾಲೆಯ ನೂತನ ಕಟ್ಟಡವನ್ನು ಈ ದಿನ ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.

Sri N Thippeswamy, Chairman of the Keshava Kripa Samvardhana Samiti which donated the land for the construction of the Vidya Kendra, Sri M P Kumar, President of Rashtrotthana Parishat, Sri N Dinesh Hegde, General Secretary of Parishat, Sri C R Mukunda, Sahasarakaryavah of RSS and many more dignitaries were present.

ವಿದ್ಯಾಕೇಂದ್ರದ ನಿರ್ಮಾಣಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಕೇಶವಕೃಪಾ ಸಂವರ್ಧನ ಸಮಿತಿಯ ಅಧ್ಯಕ್ಷರಾದ ಶ್ರೀ ನಾ. ತಿಪ್ಪೇಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್‌, ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ, ಆರ್‌.ಎಸ್‌.ಎಸ್‌.ನ ಸಹಸರಕಾರ್ಯವಾಹರಾದ ಶ್ರೀ ಸಿ. ಆರ್‌. ಮುಕುಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

As a part of the ceremony religious programs like Vasturakshoghna Homa, Ganapati Havan, Griha Pravesha and a felicitation ceremony was also organized for the professionals and workers who contributed to the construction of the building.

ಸಮಾರಂಭದ ನಿಮಿತ್ತ ವಾಸ್ತುರಾಕ್ಷೋಘ್ನ ಹೋಮ, ಗಣಪತಿ ಹವನ, ಗೃಹಪ್ರವೇಶ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲದೇ ಕಟ್ಟಡ ನಿರ್ಮಾಣಕ್ಕೆ ಯೋಗದಾನ ನೀಡಿದ ತಂತ್ರಜ್ಞರು ಹಾಗೂ ಕಾರ್ಮಿಕರ ಅಭಿನಂದನಾ ಸಮಾರಂಭವನ್ನೂ ಆಯೋಜಿಸಲಾಗಿತ್ತು.

In the year 2024-25, Rashtrotthana Vidya Kendra – Somanahalli, Pre-primary to 6th Classes will start and the online registration process is in progress.

2024-25ನೇ ಸಾಲಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಪೂರ್ವಪ್ರಾಥಮಿಕದಿಂದ 6ನೇ ತರಗತಿಯವರೆಗಿನ ಕಕ್ಷೆಗಳು ಪ್ರಾರಂಭವಾಗಲಿದ್ದು, ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

https://sombng.rvkcbse.in/

Kerur, May 29: Inauguration of the New School Building, Aksharabhyasa and Vidyarambha programs were organized herein Rashtrotthana Vidya Kendra – Kerur. Sri Ma.Ni.Pra. Sri Prabhuswamy of Charantimath, Bagalkote, gave his divine presence.

ಕೆರೂರ, ಮೇ 29: ರಾಷ್ಟ್ರೊತ್ಥಾನ ವಿದ್ಯಾಕೇಂದ್ರ – ಕೆರೂರಿನ ನೂತನ ಶಾಲಾ ಕಟ್ಟಡದ ಲೋಕಾರ್ಪಣೆ ಹಾಗೂ 2024-25ನೇ ಸಾಲಿನ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಗಲಕೋಟ ಚರಂತಿಮಠದ ಶ್ರೀ ಮ.ನಿ.ಪ್ರ. ಶ್ರೀ ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

The event was commenced with offering puja to Bharatamata followed by performance of Ganapati Havan.

ಭಾರತಾಂಬೆಗೆ ಮಾಲಾರ್ಪಣೆ ಮಾಡಿ ಗಣಪತಿ ಹೋಮ ನಡೆಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.

Sri Shankaranandaji, Organizing Secretary, All India Board of Education, New Delhi; Sri N Dinesh Hegde, General Secretary, Rashtrotthana Parishat; Sri Jayanna, Secretary, RVK Schools North Cluster; and many more dignitaries graced the ceremony.

ಶ್ರೀ ಶಂಕರಾನಂದಜೀ, ಸಂಘಟನಾ ಕಾರ್ಯದರ್ಶಿ, ಅಖಿಲಭಾರತೀಯ ಶಿಕ್ಷಣ ಮಹಾಮಂಡಳ, ನವದೆಹಲಿ; ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೋತ‍್ಥಾನ ಪರಿಷತ್; ಶ್ರೀ ಜಯಣ್ಣ, ಕಾರ್ಯದರ್ಶಿ, ಆರ್.ವಿ.ಕೆ. ಶಾಲೆಗಳ ನಾರ್ತ್ ಕ್ಲಸ್ಟರ್; ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Sri Shankaranandaji told Parents and teachers have to sacrifice for the bright future and education of the children.

ಮಕ್ಕಳ ಉಜ್ವಲ ಭವಿಷ್ಯ ಹಾಗೂ ಶಿಕ್ಷಣಕ್ಕಾಗಿ ಪಾಲಕರು, ಶಿಕ್ಷಕರು ತ್ಯಾಗ ಮಾಡಬೇಕು ಎಂದು ಶ್ರೀ ಶಂಕರಾನಂದಜೀ ಹೇಳಿದರು.

https://kerurbgkt.rvkcbse.in/

June 2: Inauguration of the New School Building, Aksharabhyasa and Vidyarambha programs were organized herein Rashtrotthana Vidya Kendra – Ballari. Sriman Niranjana Jagadguru Kotturu Basavalinga Mahaswamiji of Sri Jagadguru Kottoraswami Mahasamsthanamath, gave the divine presence.

ಬಳ್ಳಾರಿ, ಜೂನ್ 2: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬಳ್ಳಾರಿಯ ನೂತನ ಶಾಲಾ ಕಟ್ಟಡದ ಲೋಕಾರ್ಪಣೆ ಹಾಗೂ 2024- 25ನೇ ಸಾಲಿನ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಜಗದ್ಗುರು ಕೊಟ್ಟೂರಸ್ವಾಮಿ ಸಂಸ್ಥಾನಮಠದ ಪರಮಪೂಜ್ಯ ಶ್ರೀಮನ್ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

Dr. Vijayabhaskara Reddy, Ballari Vibhag Sanghachalak, RSS; Sri T Prasannachar, Pranta Saha Karyavah, RSS Karnataka North Region; Sri N Dinesh Hegde, General Secretary of Rashtrotthana Parishat; and many dignitaries graced the ceremony. The event was commenced with offering puja to Bharatamata followed by performance of Ganapati Havan.

ಡಾ. ವಿಜಯಭಾಸ್ಕರ ರೆಡ್ಡಿ, ಬಳ್ಳಾರಿ ವಿಭಾಗ ಸಂಘಚಾಲಕರು, ಆರ್.ಎಸ್.ಎಸ್; ಶ್ರೀ ಟಿ ಪ್ರಸನ್ನಾಚಾರ್, ಪ್ರಾಂತ ಸಹ ಕಾರ್ಯವಾಹ, ಆರ್‍.ಎಸ್.ಎಸ್. ಕರ್ನಾಟಕ ಉತ್ತರ ಪ್ರಾಂತ; ಶ್ರೀ ನಾ ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೋತ‍್ಥಾನ ಪರಿಷತ್; ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಭಾರತಾಂಬೆಗೆ ಮಾಲಾರ್ಪಣೆ ಮಾಡಿ ಗಣಪತಿ ಹೋಮ ನಡೆಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

https://blri.rvkcbse.in/

Leave a Reply

Your email address will not be published. Required fields are marked *