Dharwad, Aug 24: Renowned actor, creative director, Sri Suchendra Prasad graced the closing ceremony of Sahitya Saraswat – Bhasha Utsav 2024-25 organised herein Rashtrotthana Vidya Kendra – Dharwad, Neeralakatti, for the students of Rashtrothana CBSE Schools and a shared his special experiences.
In the two-day language festival, Special Sessions were organised on Sanskrit Kannada story presentation, Dasa literature specialty, Sanskrit language structure, Introduction to Kannada literature, Astrology Vijnanam, Visit to D. R. Bendre’s House, Shastradhyaya order and almanac production, theater experience, creation of poetry in the lap of nature, ethical poems, vachana literature, introduction to Kalidasa’s poetry, love of language, life guidance, Indian knowledge heritage.
ಧಾರವಾಡ, ಆಗಸ್ಟ್ 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ. ಶಾಲೆಗಳ 2024-25ನೇ ಸಾಲಿನ ಸಾಹಿತ್ಯ ಸಾರಸ್ವತ – ಭಾಷಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟ, ಸೃಜನಶೀಲ ನಿರ್ದೇಶಕ, ಶ್ರೀ ಸುಚೇಂದ್ರ ಪ್ರಸಾದ್ ಅವರು ಉಪಸ್ಥಿತರಿದ್ದು, ತಮ್ಮ ಅನುಭವ ವಿಶೇಷಗಳನ್ನು ಹಂಚಿಕೊಂಡರು.
ಎರಡು ದಿನಗಳ ಕಾಲ ನಡೆದ ಭಾಷಾ ಉತ್ಸವದಲ್ಲಿ ನುರಿತ ಭಾಷಾ ತಜ್ಞರಿಂದ ಸಂಸ್ಕೃತ ಕನ್ನಡ ಕಥಾ ಪ್ರಸಂಗ, ದಾಸ ಸಾಹಿತ್ಯ ವಿಶೇಷತೆ, ಸಂಸ್ಕೃತ ಭಾಷಾ ರಚನೆ, ಕನ್ನಡ ಸಾಹಿತ್ಯ ಪರಿಚಯ, ಖಗೋಳ ವಿಜ್ಞಾನಮ್, ವರಕವಿ ದ. ರಾ. ಬೇಂದ್ರೆಯವರ ಮನೆ ಭೇಟಿ, ಶಾಸ್ತ್ರಾಧ್ಯಯನ ಕ್ರಮ ಮತ್ತು ಪಂಚಾಂಗ ನಿರ್ಮಾಣ, ರಂಗಭೂಮಿ ಅನುಭವ, ಪ್ರಕೃತಿ ಮಡಿಲಲ್ಲಿ ಕಾವ್ಯ ರಚನೆ, ನೀತಿ ಕಾವ್ಯಗಳು, ವಚನ ಸಾಹಿತ್ಯ, ಕಾಳಿದಾಸನ ಕಾವ್ಯ ಪರಿಚಯ, ಭಾಷಾ ಪ್ರೇಮ, ಜೀವನ ಮಾರ್ಗದರ್ಶನ, ಭಾರತೀಯ ಜ್ಞಾನ ಪರಂಪರೆ, ಈ ವಿಷಯಗಳ ಕುರಿತು ಅವಧಿಗಳು ನಡೆದವು.
ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಡಾ. ಅನಿತಾ ರೈ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
https://dwd.rvkcbse.in/
#Rashtrotthana #RashtrotthanaParishat #RashtrotthanaVidyaKendra #RVK #RVKCBSE #RVKDharwad #Sanskrit #LiteratureFestival
Project Info
- Category: News & Media
- Location: Dharwad
- Completed Date: 24 Aug 2024