
Bengaluru, Apr 25: The 2nd Vehicle of Free Clinic on Wheels of Rashtrotthana Hospital was launched herein Ambedkar Nagar Seva Vasati (Slum). The program was presided over by Sri M P Kumar, President of Rashtrotthana Parishat. Dr. Moha Mangani and Dr. Karnal Anand Shankar was also present.
ಸೇವಾವಸತಿಯಲ್ಲಿ (ಸ್ಲಂ) ಉಚಿತ ಸಂಚಾರಿ ಚಿಕಿತ್ಸಾಲಯದ 2ನೇ ವಾಹನ ಸೇವೆಗೆ ಚಾಲನೆ
ಬೆಂಗಳೂರು, ಏ. 25: ಅಂಬೇಡ್ಕರ್ ನಗರದ ಸೇವಾವಸತಿಯಲ್ಲಿ (ಸ್ಲಂ) ರಾಷ್ಟ್ರೋತ್ಥಾನ ಆಸ್ಪತ್ರೆಯ ಉಚಿತ ಸಂಚಾರಿ ಚಿಕಿತ್ಸಾಲಯದ 2ನೇ ವಾಹನ ಸೇವೆಗೆ ಚಾಲನೆ ಕೊಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಮೋಹನ್ ಮಂಗಾನಿ, ಡಾ. ಕರ್ನಲ್ ಆನಂದ ಶಂಕರ್ ಅವರು ಉಪಸ್ಥಿತರಿದ್ದರು.
ಮೊದಲ ಉಚಿತ ಸಂಚಾರಿ ಚಿಕಿತ್ಸಾಲಯವನ್ನು 2024ರಲ್ಲಿ ಸೇವಾವಸತಿಯ ಸೇವಾ ಯೋಜನೆಗೆ ಜೋಡಿಸಿಕೊಳ್ಳಲಾಗಿ ಈವರೆಗೆ 15,000ಕ್ಕೂ ಹೆಚ್ಚಿನ ಸ್ಲಂ ನಿವಾಸಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಮೊದಲ ಚಿಕಿತ್ಸಾಲಯವು ಪ್ರತಿದಿನ 12 ಸೇವಾವಸತಿಗಳಿಗೆ ಭೇಟಿಕೊಡುತ್ತಿದ್ದು, ಎರಡನೇ ಚಿಕಿತ್ಸಾಯವೂ ಅಷ್ಟೇ ಸಂಖ್ಯೆಯ 12 ಸೇವಾವಸತಿಗಳಲ್ಲಿ ಆರೋಗ್ಯ ಕಾಳಜಿ ಮಾಡಲಿದೆ.
The first Clinic on Wheels was dedicated for Seva Vasati Service Project in 2024 and has benefited over 15,000 Slum Dwellers so far. The first vehicle 12 Seva Vasatis daily, while the second vehicle will provide healthcare in the same number of 12 Seva Vasatis.
ಶ್ರೀ ಎಂ ಪಿ ಕುಮಾರ್ ಅವರು ರಾಷ್ಟ್ರೋತ್ಥಾನ ಪರಿಷತ್ನ ಮೂಲ ಧ್ಯೇಯವೇ ಸೇವೆ ಎಂದು ಹೇಳುತ್ತಾ ಸಮಾಜದಲ್ಲಿ ಎಲ್ಲ ವರ್ಗದವರೂ ಸಮಾನತೆ, ಸಾಮರಸ್ಯಗಳೊಂದಿಗೆ ಪರಸ್ಪರ ಸಹಕಾರದಿಂದ ಬದುಕಬೇಕು ಹಾಗೂ ಶಿಕ್ಷಣ, ಆರೋಗ್ಯ, ಸೇವೆ ಪ್ರತಿಯೊಬ್ಬರಿಗೂ ದೊರಕಬೇಕು ಎಂದು ಹೇಳಿದರು. ಅದರ ಪ್ರಯತ್ನವನ್ನು ರಾಷ್ಟ್ರೋತ್ಥಾನವು ನಿರಂತರವಾಗಿ ಮಾಡುತ್ತಿದ್ದು, ನಮ್ಮ ಆಸ್ಪತ್ರೆಯ ನುರಿತ ವೈದ್ಯರು ನೇರವಾಗಿ ನಿಮ್ಮ ಮನೆಯ ಬಾಗಿಲಿಗೇ ಬಂದು ಉಚಿತ ಆರೋಗ್ಯ ಸೇವೆ ನೀಡಲಿದ್ದಾರೆ. ಅದರ ಉಪಯೋಗವನ್ನು ಅಂಬೇಡ್ಕರ್ ನಗರದ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಕೇಳಿಕೊಂಡರು.
ಡಾ. ಮೋಹನ್ ಮಂಗಾನಿ ಅವರು ಮಾತನಾಡುತ್ತಾ ರಾಷ್ಟ್ರೋತ್ಥಾನ ಪರಿಷತ್ ಅನೇಕ ಸೇವಾವಸತಿಯಲ್ಲಿ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ಕೆಲಸ ಮಾಡುತ್ತಿದೆ. ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳ ಮೂಲಕ ಸಮಾಜದ ಎಲ್ಲ ವರ್ಗದವರಿಗೂ ಅನುಕೂಲವಾಗುವಂತಹ ಆರೋಗ್ಯ ಸೇವೆ ನೀಡುತ್ತಿದೆ. ಸ್ಲಂಗಳಲ್ಲಿ ವಾರದಲ್ಲಿ ಒಂದು ಬಾರಿ ಸಂಚಾರಿ ಕ್ಲಿನಿಕ್ ನಿಮ್ಮ ಮನೆ ಬಾಗಿಲಿಗೇ ಬಂದು ಎಲ್ಲ ರೀತಿಯ ಆರೋಗ್ಯ ಸೇವೆಯನ್ನು ನೀಡುತ್ತಿರುವುದರ ಬಗೆಗೆ ಖುಷಿಯನ್ನು ವ್ಯಕ್ತಪಡಿಸಿ, ಜೀವನಶೈಲಿ ಸುಧಾರಣಾ ಉಪಚಾರವನ್ನೂ ಜೋಡಿಸಿಕೊಳ್ಳಬೇಕೆಂಬ ಸಲಹೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ನಗರದ ಸೇವಾವಸತಿಯ ಮುಖಂಡರಾದ ಶ್ರೀ ಅಣ್ಣಯ್ಯಪ್ಪ, ಸಂಯೋಜಕರಾದ ಶ್ರೀ ಜೋಗೇಶ್, ಶ್ರೀ ಅನಿಲ್ ಉಪಸ್ಥಿತರಿದ್ದರು.
https://www.rashtrotthanahospital.com/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaHospital #jmrhrc #ClinicOnWheels #HealthCare #SevaVasati #SlumDevelopment
Project Info
- Category: News & Media
- Location: Ambedkar Nagar, Bengaluru
- Completed Date: 25 Apr 2025