
ರಾಷ್ಟ್ರೋತ್ಥಾನ 60ರ ಸಂಭ್ರಮದಲ್ಲಿ ಹೊಳೆಹೊನ್ನೂರಿನ ವಿದ್ಯಾಲಯದಲ್ಲೊಂದು ಮೆಲುಕು
ಏ. 14: ಸೌರಯುಗಾದಿ ಹಾಗೂ ಅಂಬೇಡ್ಕರ್ ಅವರ 135ನೇ ಜಯಂತಿಯ ಸುಯೋಗದಲ್ಲಿ, ರಾಷ್ಟ್ರೋತ್ಥಾನದ ಷಷ್ಠ್ಯಬ್ದಿ ಸಂಭ್ರಮಾಚರಣೆಯ ಭಾಗವಾಗಿ ರಾಷ್ಟ್ರೋತ್ಥಾನ ವಿದ್ಯಾಲಯ – ಹೊಳೆಹೊನ್ನೂರಿನಲ್ಲಿ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಿರಿಯ ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿಯವರು, ಶಿಕ್ಷಕ-ಶಿಕ್ಷಕಿಯರು, ಹಿತೈಷಿಗಳು, ದಾನಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಉನ್ನತಿ, ಸಂಘರ್ಷಮಯ ಇತಿಹಾಸ, ಪೋಷಕರ ತೃಪ್ತಿ, ಮಕ್ಕಳ ಭಾವುಕತೆ, ಶಿಕ್ಷಕರ ಧನ್ಯಭಾವ, ಹಿತೈಷಿಗಳ ಕಳಕಳಿ, ದಾನಿಗಳ ಸಹಕಾರದ ಭಾವಬಿಂದುಗಳು ಬೆಳಗಿನಿಂದ ಸಂಜೆಯವರೆವಿಗೂ ಓತಪ್ರೋತವಾಗಿ ಬಿತ್ತರಗೊಳ್ಳುತ್ತಲೇ ಇದ್ದವು.
ಒಂದು ಮಟ್ಟದಲ್ಲಿ ಸಮಾಜಪರಿವರ್ತನಾ ಕೇಂದ್ರವಾಗಿರುವ ವಿದ್ಯಾಲಯದ ಮೂಲ ಕಾರ್ಯಚಟುವಟಿಕೆ, ರಾಷ್ಟ್ರೋತ್ಥಾನ ಬಳಗದ ಬಗೆಗೂ ಸಾಕಷ್ಟು ಉಲ್ಲೇಖಗಳಿದ್ದವು.
ರಾಷ್ಟ್ರೋತ್ಥಾನ ಬಳಗದ ಮೊದಲ ಅಧ್ಯಕ್ಷರಾದ ಶ್ರೀ ಹೊ. ಭೈ. ಕೃಷ್ಣಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಶ್ರೀ ರಂಗಪ್ಪ ಅವರು ವೇದಿಕೆಯನ್ನು ಅಲಂಕರಿಸಿದ್ದರು.
ವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ಹೊ ರಾ ರಾಜಾರಾಂ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಆಶಯವನ್ನು ಹಂಚಿಕೊಂಡರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #panchamukhishikshana #rashtrotthanavidyalaya #rashtrotthanavidyalayaholehonnuru #Meluku
Project Info
- Category: News & Media
- Location: Holehonnuru, Shivamogga
- Completed Date: 14 Apr 2025