ಪುಸ್ತಕ ಪ್ರದರ್ಶನ ಒಂದು ಹಬ್ಬವಾಗಿ, ಜನರಂಜಕವಾಗಿ ಉದ್ಬೋಧಕವಾಗಿದೆ – ಶತಾವಧಾನಿ ಡಾ. ಆರ್. ಗಣೇಶ್
ಬೆಂಗಳೂರು, ನ. 23: ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ 4 ಕೃತಿಗಳನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರು ಲೋಕಾರ್ಪಣ ಮಾಡಿ 3 ಕೃತಿಗಳಾದ ಸಂದು ಹೋದ ಸಾತ್ವಿಕರು, ಮಂತ್ರ ಸಂತಾನ ಮತ್ತು ಮೂರು ನಾಟಕಗಳು ಹಾಗೂ Silhouettes of Excellenceಗಳನ್ನು ಪರಿಚಯಿಸಿದರು.
ಲೋಕಾರ್ಪಣಗೊಂಡ ಕೃತಿಗಳು:
- ಶ್ರೀ ಎಂ. ಶ್ರೀನಿವಾಸ್ ಅವರ ನನ್ನ ಕೃಷ್ಣ – ಲೋಕೋತ್ತರ ನಾಯಕನ ಜೀವನಕಥನ
- ಡಾ. ಹೆಚ್. ಆರ್. ವಿಶ್ವಾಸ್ ಅವರ ಸಂದುಹೋದ ಸಾತ್ವಿಕರು
- ಶ್ರೀ ದಿವಾಕರ ಹೆಗಡೆ ಅವರ ಮಂತ್ರ ಸಂತಾನ ಮತ್ತು ಮೂರು ನಾಟಕಗಳು
- ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರ Silhouettes of Excellence
ಈ ಪುಸ್ತಕಗಳೂ ಒಳಗೊಂಡಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಎಲ್ಲ ಪುಸ್ತಕಗಳೂ ರಿಯಾಯಿತಿಯಲ್ಲಿ ಲಭ್ಯ ಇವೆ, Onlineನಲ್ಲಿ ಕೂಡ. https://www.sahityabooks.com/
37 ದಿನಗಳ ಕನ್ನಡ ಪುಸ್ತಕ ಹಬ್ಬ (ಅ.26 – ಡಿ.1)
@ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು
Locate: https://maps.app.goo.gl/bXdRKaPHmheFFLL9A
ವ್ಯಕ್ತಿ ಚಿತ್ರಣದ ಲಘುಗಾತ್ರದ ಸಂದುಹೋದ ಸಾತ್ವಿಕರು ಪರಿಚಯಿಸುತ್ತ ಡಾ. ಆರ್ ಗಣೇಶ್ ಅವರು “ವ್ಯಕ್ತಿ ಚಿತ್ರ ಮಾಡುವವರು, ಅನುಭವ ಕಥನ ಬರೆಯುವವರು, ವ್ಯಕ್ತಿತ್ವ ನಿರ್ಮಾಣ ಕೋವಿದರೆದಂದು ಎನಿಸಿಕೊಂಡವರೂ ಇದನ್ನು ಗಟ್ಟಿ ಮಾಡಿಕೊಂಡರೆ ಒಳ್ಳೆಯದು ಎನಿಸುತ್ತದೆ” ಎನ್ನುತ್ತ ಕೃತಿಯ ಓದಿನಿಂದಾಗುವ ಲಾಭವನ್ನು ತಿಳಿಸಿದರು. ಲೇಖಕರು ಬರೆದ “ನಾನು ನೋಡಿರದಿದ್ದನ್ನು ಬರೆದಿಲ್ಲ. ನಾನು ನೋಡಿದ್ದನ್ನು ಮಾತ್ರ ಬರೆದಿರುವೆ” ಎನ್ನುವ ಮಾತನ್ನು ಉಲ್ಲೇಖಿಸಿ, ಆರ್. ಗಣೇಶ್ ಅವರು “ಈ ರೀತಿ ಬರೆಯಲು ತುಂಬ ಪ್ರಾಮಾಣಿಕತೆ ಬೇಕು. ವಿಶ್ವಾಸ್ ಅವರ ಈ ಪ್ರಾಮಾಣಿಕತೆಯೇ ಈ ಪುಸ್ತಕದ ಮೌಲ್ಯ” ಎಂದರು. ಕೃತಿಯಲ್ಲಿ ಬಗ್ಗೆ ಡಾ. ಹೆಚ್. ಆರ್. ವಿಶ್ವಾಸ್ ಅವರು ಬರೆದ ವ್ಯಕ್ತಿಗಳ ಬಗ್ಗೆಯೂ ಓದುಗರಿಗೆ ಸಂಕ್ಷಿಪ್ತ ವಿವರ ನೀಡಿದರು.
ಮಂತ್ರ ಸಂತಾನ ಮತ್ತು ಮೂರು ನಾಟಕಗಳು ಕೃತಿಯ ಕುರಿತು ಹೇಳುತ್ತ “ಈ ಕೃತಿಗಳನ್ನು ಯಕ್ಷಗಾನಕ್ಕೂ ಬಳಸಬಹುದು; ಈ ರೂಪಕಗಳ ವಿಶೇಷ ಎಂದರೆ ಅವರು ಎಲ್ಲಿಯೂ ಕೂಡ ಈ ಪಾತ್ರಕ್ಕೆ ಅನ್ಯಾಯ ಆಯ್ತು, ಇದಕ್ಕೆ ನಾನು ನ್ಯಾಯ ಮಾಡ್ತೀನಿ ಎಂದು ಹೊರಡುವಂತಹ ಸಾಮಾಜಿಕ ನ್ಯಾಯದ ಸಾಹಿತ್ಯಿಕ ನ್ಯಾಯದ ಹೋರಾಟಕ್ಕೆ ತೊಡಗುವುದಿಲ್ಲ; ಯಾವುದೇ ಪಾತ್ರವೂ ನಮ್ಮೊಳಗೇ ಇರುತ್ತದೆ. ಬದುಕಿನಲ್ಲಿರುತ್ತದೆ. ಆ ಪಾತ್ರವನ್ನು ನಮಗೆ ಹೇಗೆ ಹತ್ತಿರ ಮಾಡಿಕೊಳ್ಳಬಹುದು, ಅದೇ ಸಂದರ್ಭದಲ್ಲಿ ಹತ್ತಿರ ಮಾಡಿಕೊಳ್ಳುವ ಭರದಲ್ಲಿ ಆರೋಪ ಮಾಡಿಕೊಂಡರೆ ನಮಗಾಗುವ ಅನರ್ಥ ಏನು ಅಂತ ಒಂದು ಸಂಯಮಪೂರ್ಣವಾದ ಸ್ನಿಗ್ಧತೆಯನ್ನು ಇಟ್ಟುಕೊಳ್ಳುತ್ತಾರೆ. ಈ ಲೋಕದ ಸಾಹಿತ್ಯ ತೋರಿಸುವ ಸಮಸ್ಯೆಯನ್ನು ಬೇರೊಂದು ನೆಲೆಯಿಂದ ನೋಡುತ್ತಾರೆ; ಸಮಸ್ಯೆಗೆ ಪರಿಹಾರವನ್ನು ಹೇಳುವುದರಿಂದ ಅವರ ರೂಪಕಗಳು ರಸಭರಿತವಾಗಿ ನಮಗೆ ತೋರುತ್ತದೆ. ಅವರು ಯಾವುದೋ ಸಿದ್ಧಾಂತದ, ಪಾತ್ರದ ವಕ್ತಾರರಾಗದೇ, ಜೀವನದ ಅಧಿಕೃತ ವಕ್ತಾರರಾಗುತ್ತಾರೆ” ಎಂದು ಕೃತಿಯನ್ನು ವರ್ಣಿಸಿದರು.
Silhouettes of Excellence ಕೃತಿಯನ್ನು ಬೇರೆಬೇರೆ ಭಾಷೆಯವರಿಗೆ ತೋರಿಸಿ, ನಮ್ಮಲ್ಲಿ ಎಷ್ಟು ದೊಡ್ಡ ವಿಭೂತಿಗಳಿದ್ದರು ಎನ್ನುವುದನ್ನು ಬೇರೆಯವರೂ ತಿಳಿದುಕೊಳ್ಳಲಿ ಎಂದು ಅಭಿಪ್ರಾಯಪಟ್ಟರು.
ನನ್ನ ಕೃಷ್ಣ – ಲೋಕೋತ್ತರ ನಾಯಕನ ಜೀವನಕಥನವನ್ನು ಪರಿಚಯಿಸುತ್ತ, ಶ್ರೀ ದಿವಾಕರ ಹೆಗಡೆ ಅವರು ಇವರದೊಂದು ವಿಶಿಷ್ಟ ಪ್ರಯತ್ನ ಎಂದರು. ಕೃಷ್ಣ ಕಪ್ಪಾದರೂ ಭಾರತದ ಕುರಿತಾದ ಬೆಳಕನ್ನೆಲ್ಲ ಆ ಕಪ್ಪು ಕೃಷ್ಣನ ಮೂಲಕವೇ ಪಡೆಯಬೇಕಾದದ್ದು ಎನ್ನುವುದು ತನಗೆ ಯಾವಾಗಲೂ ಬಹಳ ಪ್ರೀತಿಯಾದದ್ದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ನಮ್ಮ ದೇಶದ ಮೌಲ್ಯಗಳನ್ನು, ನಾವು ಬೆಳೆಸಿಕೊಂಡು ಬಂದ ಸುಸ್ಥಿರ ಜೀವನಶೈಲಿಯನ್ನು ಒಪ್ಪುವ ಸಾಹಿತ್ಯವನ್ನು ಬರೆದರೆ ಅದು ಜೀವದಾಯಕ. ಅದಲ್ಲವನ್ನು ಬರೆದರೆ ಲಾಭದಾಯಕ. ಶ್ರೀನಿವಾಸನ್ ಅವರದು ಜೀವದಾಯಕ ಕೃಷಿ” ಎಂದರು.
Silhouettes of Excellence ಕೃತಿಯ ಸಂಪಾದಕರಾದ ಶ್ರೀ ಹರಿ ರವಿಕುಮಾರ್ ಕೃತಿಯ ಅನುವಾದಕ್ಕೆ ಕಾರಣರಾದ ಎಲ್ಲರಿಗೂ, ಹಾಗೂ ಅನುವಾದಕ್ಕೆ ಅನುಮತಿಸಿದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿಯವರಿಗೂ ಧನ್ಯವಾದವನ್ನು ಅರ್ಪಿಸಿದರು.
#Rashtrotthana #RashtrotthanaParishat #RashtrotthanaSahitya #kannada #kannadapustaka #KannadaPustakaHabba #samskarabharathi #bookrelease #rganesh
Project Info
- Category: News & Media
- Location: Keshava Shilpa, Bengaluru
- Completed Date: 23 Nov 2024