
Dharwad, June 2: The Inauguration of the New Hostel Building of Rashtrotthana Pre-University College – Dharwad and Vidyarambha of the First PUC Students took place herein Mummigatti.
ಧಾರವಾಡ, ಜೂನ್ 2: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು – ಧಾರವಾಡ ನೂತನ ವಸತಿನಿಲಯ ಕಟ್ಟಡದ ಲೋಕಾರ್ಪಣೆ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ವಿದ್ಯಾರಂಭ ಕಾರ್ಯಕ್ರಮವು ಇಲ್ಲಿನ ಮುಮ್ಮಿಗಟ್ಟಿಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕರಾದ ಶ್ರೀ ರಘುನಂದನ ಅವರು “ಭಾರತ ಶ್ರೀಮಂತವಾಗಬೇಕು. ಭಾರತ ಶ್ರೀಮಂತವಾಗಬೇಕು ಎಂದರೆ ಭಾರತೀಯರು ಶ್ರೀಮಂತರಾಗಬೇಕು ಎಂದರ್ಥ. ಭಾರತೀಯರು ಶ್ರೀಮಂತರಾಗಬೇಕಾದರೆ ಮಕ್ಕಳಲ್ಲಿ ನಡತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ” ಎಂದರು.
ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ ಶಾಲೆಗಳ ಉತ್ತರ ವಲಯದ ಆಡಳಿತಾತ್ಮಕ ಪ್ರಮುಖರಾದ ಶ್ರೀ ಜಯಣ್ಣ ಎಚ್. ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ “ಕಾಲೇಜು ಮಕ್ಕಳ ಮನಸ್ಸು ಎತ್ತೆಂದರಲ್ಲಿ ಅಲೆದಾಡುವ ಮನಸ್ಸು. ಅಂತಹ ಮನಸ್ಸಿನಲ್ಲಿ ಒಂದಿಷ್ಟು ಸಂಸ್ಕಾರದ ಬೀಜವನ್ನು ಬಿತ್ತಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಲ್ಪಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಚಾರ್ಯರಾದ ಡಾ. ಅನಿತಾ ರೈ, ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನ ಪ್ರಧಾನಾಚಾರ್ಯರಾದ ಶ್ರೀ ರವಿಪ್ರಕಾಶ್, ಆಡಳಿತಾಧಿಕಾರಿಗಳಾದ ಡಾ. ಶ್ರೀಕಾಂತ ಕೆ, ಶ್ರೀ ಕೃಷ್ಣ ಜೋಶಿ, ಶ್ರೀ ಎಂ.ಎನ್. ಮಠಪತಿ ಉಪಸ್ಥಿತರಿದ್ದರು.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaPUCollege #RPUCDharwad
Project Info
- Category: News & Media
- Location: Dharwad
- Completed Date: 02 June 2025