
Hassan, Mar 9: The Building Inauguration of the 15th School of Rashtrotthana Vidya Kendra CBSE School Group was held herein SMK Nagar, BT Koppalu.
ಹಾಸನದಲ್ಲಿ ರಾಷ್ಟ್ರೋತ್ಥಾನದ 15ನೇ ಸಿಬಿಎಸ್‍ಇ ವಿದ್ಯಾಕೇಂದ್ರದ ಲೋಕಾರ್ಪಣೆ
ಹಾಸನ, ಮಾ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲಾ ಸಮೂಹದ 15ನೇ ಶಾಲಾ ಕಟ್ಟಡದ ಉದ್ಘಾಟನೆಯನ್ನು ಇಲ್ಲಿನ ಬಿ.ಟಿ. ಕೊಪ್ಪಲಿನ ಎಸ್.ಎಂ.ಕೆ. ನಗರದಲ್ಲಿ ನೆರವೇರಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಹಾಸನದ ಶ‍್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಸಿ. ಆರ್., ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಅವರು ಉಪಸ್ಥಿತರಿದ್ದರು.
The inauguration ceremony was graced by His Holiness Sri Sri Siddalinga Mahaswamigalu of Sri Siddaganga Math, Tumkur and His Holiness Sri Sri Shambhunatha Swamiji of Sri Adichunchanagiri Mahasamsthana Shakhamath, Hassan. During the occasion Joint General Secretary of RSS, Sri Mukunda C R and President of Rashtrotthana Parishat, Sri M P Kumar were present.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಯಶಸ್ವೀ ಪ್ರಯೋಗಗಳಲ್ಲಿ ಒಂದಾದ ರಾಷ್ಟ್ರೋತ್ಥಾನದ ವಿದ್ಯಾಕೇಂದ್ರವು ಹಾಸನದಲ್ಲಿ ಕಾರ್ಯಾರಂಭ ಮಾಡುತ್ತಲಿದ್ದು, ಅದು ಮಾದರಿ ಶಾಲೆಯಾಗುತ್ತ ಸಮಾಜ ಪರಿವರ್ತನಾ ಕೇಂದ್ರವಾಗಿ ಬೆಳೆಯಲಿ ಎಂದು ಶ್ರೀ ಮುಕುಂದ ಸಿ. ಆರ್. ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಆಶಿಸಿದರು.
ಸಾಮಾಜಿಕ ಹಾಗೂ ವ್ಯವಸ್ಥಾ ಪರಿವರ್ತನೆಯಲ್ಲಿ ಶಾಲೆಗಳ ಪಾತ್ರ ಬಹಳ ದೊಡ್ಡದಿದೆ. ಹಾಗಾಗಿ ಶಾಲೆ ಎಂದರೆ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯಗಳಿಗಿಂತ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ಸಮಾಜದ ಹತ್ತು ಸಮಸ್ತರ ಪಾಲ್ಗೊಳ್ಳುವಿಕೆಗೆ ಒಂದು ತೂಕ ಹೆಚ್ಚಿದ್ದು, ಅವರೇ ನಿಜವಾದ ಪರಿವರ್ತನಾ ವಾಹಕರು ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಭಾರತೀಯ ಜೀವವಿಮಾ ನಿಗಮದ ಲಾಂಛನದ ಉದಾಹರಣೆ ಕೊಡುತ್ತ ಮಧ್ಯದಲ್ಲಿ ಬೆಳಗುವ ದೀಪ ಜ್ಞಾನಸಂಪನ್ನ ಮಕ್ಕಳಾಗಬೇಕಾದರೆ ಶಾಲೆ ಹಾಗೂ ಮನೆಗಳು ಎರಡೂ ಕಾಳಜಿಯ ಕೈಗಳಾಗಬೇಕು ಎಂದು ಹೇಳಿದರು. ಮಕ್ಕಳು ಭವಿಷ್ಯದ ಸಂಪತ್ತು ಹಾಗೂ ಶಕ್ತಿಯಾಗಿ ರೂಪುಗೊಳ್ಳಬೇಕಾದರೆ ಭಾರತೀಯ ಪರಂಪರೆಯ ವ್ಯಕ್ತಿ ನಿರ್ಮಾಣದ ಶಿಕ್ಷಣ ಮಕ್ಕಳಿಗೆ ಸಿಗಲೇಬೇಕು ಎಂದು ಹೇಳಿದರು.
ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳು ಪುಸ್ತಕಗಳಿಗೆ ಮರಣವಿಲ್ಲ ಎಂದು ಹೇಳುತ್ತಾ ಹೂತೋಟ ಪ್ರಾರಂಭವಾಗಿದೆ, ಮಲ್ಲಿಗೆ ಅರಳಲಿ ಎಂದು ಆಶೀರ್ವದಿಸಿದರು.
ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಮಕ್ಕಳ ಸರ್ವಾಂಗೀಣ ವಿಕಾಸ ಆಗಬೇಕಾದರೆ ಶಾಲೆಯೊಟ್ಟಿಗೆ ಪೋಷಕರೂ ಕೈಜೋಡಿಸಬೇಕು ಎಂದು ಹೇಳುತ್ತಾ ರಾಷ್ಟ್ರೋತ್ಥಾನದ 60 ವರ್ಷಗಳ ಯಾತ್ರೆಯನ್ನು ನೆನಪಿಸಿಕೊಂಡರು. ಹಾಗೂ ಅಕ್ಕಪಕ್ಕದ ಶಾಲೆಗಳೊಟ್ಟಿಗೆ ಪರಸ್ಪರ ಸಹಕಾರ ತತ್ತ್ವದ ಅಡಿಯಲ್ಲಿ ಮುನ್ನಡೆಯೋಣ ಎಂಬ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡದ ಭೂಮಿಪೂಜೆ ಮಾಡಿದ್ದ ಶ್ರೀ ಜಿ. ಎಲ್. ಮುದ್ದೇಗೌಡರು, ಅಧ್ಯಕ್ಷರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಸ್ಥಳೀಯ ಜನಪ್ರತಿನಿಧಿಗಳೂ ಭಾಗವಹಿಸಿದ್ದರು.
Pre-KG to 7th Std – Registrations for 2025-26 are open
Register Online: https://hassan.rvkcbse.in/
Ph: 90369 99810
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rvkhassan #rashtrotthanavidyakendra #RegistrationsOpen #inauguration
Project Info
- Category: News & Media
- Location: Hassan
- Completed Date: 09 Mar 2025