Bengaluru, Nov 15: His Holiness Srimat Jagadguru Shankaracharya Sri Sri Swayamprakasha Satchidananda Saraswathi Mahaswamiji of Hariharpura Mutt presided over the Samana Sanskara Workshop organized herein Rashtrothana Vidya Kendra – Banashankari and blessed the children. The workshop was organized for 8th and 9th class children.
ಬೆಂಗಳೂರು, ನವೆಂಬರ್ 15: ಹರಿಹರಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಾಹಾಸ್ವಾಮೀಜಿಯವರು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಯೋಜಿಸಲಾಗಿದ್ದ ಸಮಾನ ಸಂಸ್ಕಾರ ಕಾರ್ಯಾಗಾರದ ದಿವ್ಯಸಾನ್ನಿಧ‍್ಯ ವಹಿಸಿ, ಮಕ್ಕಳನ್ನು ಆಶೀರ್ವದಿಸಿದರು. ಕಾರ್ಯಾಗಾರವನ್ನು 8 ಹಾಗೂ 9ನೇ ತರಗತಿ ಮಕ್ಕಳಿಗೆ ಆಯೋಜಿಸಲಾಗಿತ್ತು.
ಶ್ರೀ ಮಹಾಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಮಾನವನಿಗೆ ಹುಟ್ಟಿನಿಂದಲೇ ಐದು ಋಣಗಳಿರುತ್ತವೆ. ಅವುಗಳೆಂದರೆ ದೇವ ಋಣ, ಋಷಿ ಋಣ, ಪಿತೃ ಋಣ, ಸಹಮಾನವರ ಋಣ ಹಾಗೂ ಪ್ರಕೃತಿ ಋಣ. ಈ ಋಣಗಳನ್ನು ತೀರಿಸಲು ಐದು ಸಮಾನ ಸಂಸ್ಕಾರಗಳನ್ನು ನಮ್ಮ ಹಿರಿಯರು (ಋಷಿ) ನೀಡಿದ್ದಾರೆ. ಸಂಧ್ಯಾ ಪ್ರಾರ್ಥನೆ, ಸದಾಚಾರ, ಸಹಯೋಗ, ಜ್ಞಾನ ಹಂಚುವಿಕೆ, ಸಂರಕ್ಷಣೆ, ಇವುಗಳಿಂದ ಋಣವನ್ನು ತೀರಿಸುವ ಸನ್ಮಾರ್ಗದಲ್ಲಿ ನಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸ್ವಾರ್ಥಿಗಳಾಗದೇ ಕುಟುಂಬದ ಅಭಿವೃದ್ದಿಗೆ, ಸಮಾಜದ ಹಿತಕ್ಕೆ, ದೇಶದ ಅಭಿವೃದ್ಧಿಯಾಗುವಂತೆಯೂ ನಾವು ಕಾರ್ಯದಲ್ಲಿ ತೊಡಗಬೇಕು. ಜೀವಜಗತ್ತನ್ನು ನಿಯಂತ್ರಿಸುವ ಶಕ್ತಿಯೇ ದೇವರು. ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡುವವರಿಗೆ ಪ್ರಕೃತಿಯ ವೈಶಿಷ್ಟ್ಯಗಳನ್ನು ತಿಳಿಸಬೇಕೆಂದರು ಹಾಗೂ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಕಾರ್ಯಕ್ರಮವು ಶ್ರೇಷ್ಠ ವ್ಯಕ್ತಿತ್ವಗಳ ನಿರ್ಮಾಣವಾಗಬೇಕು ಎಂಬುದರ ಬಗೆಗೆ ಸೊಗಸಾಗಿ ಮೂಡಿಬಂದಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗುರುರಾಜ್ ಕೆ ಶೈಣೈ, ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ವಸಂತ್ ಕುಮಾರ್, ಸನಾತನ ಹಿಂದೂ ಸಮಾಜ ಪರಿಷತ್‍ನ ಸದಸ್ಯರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀ ದೀಪಕ್ ಅವರು ಉಪಸ್ಥಿತಿರಿದ್ದರು.
http://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaVidyaKendra #RVKCBSE #RVKBanashankari #HariharapuraSwamiji #SamanaSamskaraWorkshop
Project Info
- Category: News & Media
- Location: Banashankari, Bengaluru
- Completed Date: 15 Nov 2023